top of page

ಕನ್ನಡ ರಾಜ್ಯೋತ್ಸವ ಆಚರಣೆ


Vidyodaya Public School Udupi

ನವೆಂಬರ್ 4 ರಂದು ವಿದ್ಯೋದಯ ಪಬ್ಲಿಕ್ ಸ್ಕೂಲ್ ನ ಪೂರ್ವ ಪ್ರಾಥಮಿಕ ವಿಭಾಗವು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಮತ್ತು ಹೆಮ್ಮೆಯಿಂದ ಆಚರಿಸಿತು. ಕರ್ನಾಟಕದ ಶ್ರೀಮಂತ ಭಾಷಾ ಪರಂಪರೆ ಮತ್ತು ಕನ್ನಡದ ಬಗ್ಗೆ ಪ್ರೀತಿ ಹಾಗೂ ಗೌರವವನ್ನು ಹುಟ್ಟುಹಾಕುವ ನೆಲೆಯಲ್ಲಿ "ಕನ್ನಡ ನಾಡು" ಎಂದು ಕರೆಯಲ್ಪಡುವ ಕರ್ನಾಟಕದ ಇತಿಹಾಸ, ಪ್ರಾಮುಖ್ಯತೆ ಮತ್ತು ಕನ್ನಡ ಭಾಷೆಯ ಸಾಂಸ್ಕೃತಿಕ ಮಹತ್ವವನ್ನು ವಿವರಿಸುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಅಗತ್ಯತೆಯನ್ನು ವಿವರಿಸಿದರು. ಜೊತೆಗೆ, ವಿದ್ಯಾರ್ಥಿಗಳಿಗೆ ಕನ್ನಡದ ಹೆಸರಾಂತ ಕವಿಗಳ ಪರಿಚಯ, ಅವರ ಕೃತಿಗಳು ಭಾಷೆ ಮತ್ತು ಸಾಹಿತ್ಯ ಶ್ರೀಮಂತಿಕೆಯನ್ನು ಪರಿಚಯಿಸಲಾಯ್ತು. ಮಕ್ಕಳು ಒಟ್ಟಾಗಿ "ನಾಡ ಗೀತೆ" ಅನ್ನು ಹೆಮ್ಮೆಯಿಂದ ಹಾಡಿ ಏಕತೆಯನ್ನು ಮೆರೆದರು. ಕನ್ನಡ ರಾಜ್ಯೋತ್ಸವ ಆಚರಣೆಯು ಸ್ಮರಣೀಯವಾಗಿ ವಿದ್ಯಾರ್ಥಿಗಳ ಹೃದಯದಲ್ಲಿ ಕರ್ನಾಟಕದ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಅಪರಿಮಿತ ಅಭಿಮಾನ ಬೆಳೆಸಿತು.



bottom of page