ಅಡುಗೆ ಅನಿಲ ಪ್ರಾತ್ಯಕ್ಷಿಕೆ ಕಾರ್ಯಕ್ರಮ
- Vidyodaya
- Nov 25, 2024
- 1 min read

ತಾ. 23/11/2024 ರಂದು ವಿದ್ಯೋದಯ ಪಬ್ಲಿಕ್ ಶಾಲೆಯಲ್ಲಿ ಪ್ರಾಂಶುಪಾಲರಾದ ಅನಿತಾ. ಪಿ.ರಾಜ್ ಅವರ ನೇತೃತ್ವದಲ್ಲಿ ಸಿದ್ದಿ ಶೇಷ ಶಕ್ತಿ ಎಂಟರ್ಪ್ರೈಸಸ್ ಎಲ್. ಪಿ. ಜಿ ವಿತರಕರಾದ ಶ್ರೀ ನಾರಾಯಣ ಮತ್ತು ಶ್ರೀಮತಿ ವರ್ಷ ನಾರಾಯಣ ಅವರುಮಕ್ಕಳಲ್ಲಿ ‘ನಿಮ್ಮ ಅಡುಗೆ ನಮ್ಮ ಜವಾಬ್ದಾರಿ’ಎಂಬ ವಿಷಯದ ಪ್ರತಿಜ್ಞೆ ಮಾಡಿಸಿ,ಹೇಗೆ ಅಡುಗೆ ಅನಿಲವನ್ನು ಬಳಸಬೇಕು,ವಿಮಾಸೌಕರ್ಯ, ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಕುರಿತಂತೆ ರಸ ಪ್ರಶ್ನೆಯನ್ನು ಕೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಅಡುಗೆ ಅನಿಲದ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಈ ಕಾರ್ಯಕ್ರಮಕ್ಕೆ ಸ್ವಾಗತವನ್ನು ಕಾರ್ಯ ಸಂಯೋಜಕರಾದ ಶ್ರೀಮತಿ ಶುಭಾರಾವ್, ಹಾಗೂ ಶಿಕ್ಷಕಿಯಾದ ಶ್ರೀಮತಿ ಜ್ಯೋತಿ ಮನೋಜ್ ಶೆಟ್ಟಿ ಇವರು ವಂದನಾರ್ಪಣೆಯನ್ನು ಮಾಡುವ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿದರು.